ಈಗಿನ ಕಾಲದಲ್ಲಿ ಪ್ರೀತಿಗೆ ಬೆಲೆಯೇ ಇಲ್ಲವಾಗಿದೆ . ಒಬ್ಬರ ಜೊತೆ ಪ್ರೀತಿ ಇನ್ನೊಬ್ಬನ ಜೊತೆ ದೇಹ ಸಂಬಂಧ ಬೆಳೆಸುವುದು ಕಾಮನ್ ಆಗಿದೆ . ಇದು ಹುಡುಗ ಮತ್ತು ಹುಡುಗಿಯರಲ್ಲಿ ಸಾಮಾನ್ಯವಾಗಿದೆ . ಆದರೆ ಇದರ ಪರಿಣಾಮ ಮಾತ್ರ ಬಹಳ ಘೋರವಾಗಿರುತ್ತೆ . ಇದು ದ್ವೇಷಕ್ಕೆ ತಿರುಗಿ ಕೊಲೆಯಲ್ಲಿ ಮುಕ್ತಾಯವಾಗುತ್ತೆ . ಅಂತಹದೇ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ .
ಯಾರೂ ನಂಬಿಕೆಗೆ ದ್ರೋಹ ಮಾಡಬೇಡಿ ಎಂದು ಆ ವ್ಯಕ್ತಿ ಆಕ್ರೋಶದಿಂದ ಆ ಹೆಣದೊಂದಿಗೆ ವಿಡಿಯೋ ಶೂಟ್ ಮಾಡಿದ್ದಾನೆ. ನಿಮ್ಮ ಮೇಲಿಟ್ಟ ನಂಬಿಕೆಗೆ ಮೋಸ ಮಾಡಬೇಡಿ ಎಂದು ಹೇಳುವ ಆ ಯುವಕ ಹಾಸಿಗೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯ ಶವವನ್ನು ತೋರಿಸುತ್ತಾನೆ. ಆಕೆಯ ಕುತ್ತಿಗೆ ಸೀಳಿ ಕೊಂದಿರುವುದು ಆ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

ಶಿಲ್ಪಾ ಝರಿಯಾ (25) ಮೃತ ಮಹಿಳೆ. ಜಬಲ್‍ಪುರದ ಮೇಖ್ಲಾ ರೆಸಾರ್ಟ್‍ನಲ್ಲಿರುವ ಕೊಠಡಿಯಲ್ಲಿ ಶಿಲ್ಪಾಳನ್ನು ಅಭಿಜಿತ್‌ ಎಂಬಾತ ಕರೆಸಿಕೊಂಡಿದ್ದಾನೆ. ನಂತರ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದ ಅಭಿಜಿತ್ ಆಕೆಯ ಶವದೊಂದಿಗಿನ ಸರಣಿ ವೀಡಿಯೋವನ್ನು (Video) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ.
ಮೂಲಗಳ ಪ್ರಕಾರ, ಪಾಟ್ನಾದ ವ್ಯಾಪಾರಿಯಾಗಿರುವ ಅಭಿಜಿತ್​ನ ಗೆಳೆಯ ಜಿತೇಂದ್ರ ಆ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಆಕೆ ಜಿತೇಂದ್ರ ಅವರಿಂದ ಸುಮಾರು 12 ಲಕ್ಷ ರೂ. ಸಾಲ ಪಡೆದು ಜಬಲ್‌ಪುರಕ್ಕೆ ಪರಾರಿಯಾಗಿದ್ದಳು. ಹೀಗಾಗಿ, ಜಿತೇಂದ್ರನ ಸೂಚನೆ ಮೇರೆಗೆ ಆ ಯುವತಿಯನ್ನು ಅಭಿಜಿತ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪೊಲೀಸ್ ಸೈಬರ್ ಸೆಲ್ ಜೊತೆಗೆ 4 ವಿಶೇಷ ತಂಡಗಳು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

By Kumar K