ಆರ್ಥಿಕವಾಗಿ ಸ್ಥಿತಿವಂತರೆಲ್ಲರೂ ದಾನಾಸಕ್ತರಾಗಿರಲೇಬೇಕೆಂದಿಲ್ಲ.

ಆದರೆ, ಇಲ್ಲೊಬ್ಬರು ೮೦ ಹರೆಯ ಭಿಕ್ಷುಕಿ ಬೇಡಿ ದೊರಕಿದ ಹಣವನ್ನೇ ಉಳಿಸಿ ಈ ತನಕ ದೇವಸ್ಥಾನಗಳಿಗೆ ಸುಮಾರು 9 ಲಕ್ಷ ರು.ದೇಣಿಗೆ ನೀಡಿ ಮಾದರಿ ಎನಿಸಿದ್ದಾರೆ.

ಕುಂದಾಪುರ ತಾಲೂಕು ಸಾಲಿಗ್ರಾಮದ 80 ವೃದ್ಧೆ #ಅಶ್ವತ್ಥಮ್ಮ ಒಂಟಿ ಮಹಿಳೆ. ಹಲವು ವರ್ಷಗಳಿಂದ ದೇವಸ್ಥಾನ, ಟೋಲ್‌ಗೇಟ್‌ ಪರಿಸರಗಳಲ್ಲಿ ಭಿಕ್ಷೆ ಬೇಡಿ ಸಂಗ್ರಹಿಸಿದ ಹಣವನ್ನು ಉಳಿಸಿ ದೇವಸ್ಥಾನಗಳ ಅನ್ನದಾನ ಕೈಂಕರ್ಯಕ್ಕೆ ಕೊಡುಗೆಯಾಗಿ ನೀಡುತ್ತಾ ಬಂದಿದ್ದಾರೆ.

ಇವರು ಗಂಡ, ಮಕ್ಕಳೊಂದಿಗೆ ಸಂಸಾರ ಸಾಗಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ಮೊದಲು ಗಂಡ, ಬಳಿಕ ಮಕ್ಕಳು ತೀರಿ ಹೋದ ಬಳಿಕ ಜೀವನದಲ್ಲಿ ಜಿಗುಪ್ಸೆ ಹೊಂದಿ ಮನೆ ತೊರೆದರು.

ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನದ ಬಳಿ ಭಿಕ್ಷೆ ಬೇಡಲು ಆರಂಭಿಸಿ, ದೇವಾಲಯ ಪರಿಸರದಲ್ಲಿ ವಾಸ್ತವ್ಯ ಹೂಡಿದರು.

ತನ್ನವರಿಲ್ಲದ ಕೊರಗು ಮರೆಯಲು ತನ್ನಿಂದ ಸಮಾಜಕ್ಕೆ ಕೊಡುಗೆ ನೀಡಬೇಕೆಂದು ಸಂಕಲ್ಪ ಮಾಡಿದರು. ಗಟ್ಟಿನಿರ್ಧಾರ ಮಾಡಿ ಭಿಕ್ಷೆ ಬೇಡಲು ಆರಂಭಿಸಿ ಭಿಕ್ಷೆಯಲ್ಲಿ ಸಂಗ್ರಹವಾಗುವ ಹಣವನ್ನು ಪ್ರತಿದಿನ ಪಿಗ್ಮಿಗೆ ಹಾಕಲು ಆರಂಭಿಸಿದರು.

ಹಗಲಿಡೀ ಭಿಕ್ಷೆ ಬೇಡಿ ಸಂಗ್ರಹಿಸಿದ ಹಣವನ್ನು ಪಿಗ್ಮಿಗೆ ಹಾಕತೊಡಗಿದರು. ಸಂಗ್ರಹವಾದ ಮೊತ್ತ ಲಕ್ಷ ತಲುಪಿದಾಗ ಆರಂಭದಲ್ಲಿ ತಾನು ಭಿಕ್ಷೆ ಬೇಡಲು ಆಸರೆ ನೀಡಿದ ಸಾಲಿಗ್ರಾಮದ ಗುರು ನರಸಿಂಹ ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿ ಕೃತಾರ್ಥರಾದರು.

By Kumar K