ಅಫ್ತಾಬ್ ಅಮೀನ್ ಪೂನಾವಾಲಾ, ತನ್ನ ಪ್ರೇಯಸಿಯನ್ನು ಕೊಂದು, ಆಕೆಯ ದೇಹವನ್ನು ಕತ್ತರಿಸಿ, ಭಾಗಗಳನ್ನು ದೆಹಲಿಯಾದ್ಯಂತ ಎಸೆದಿದ್ದಾನೆ. ಕೊಲೆಯಾದ ಬಳಿಕ ಅವಳ ದೇಹ ಮನೆಯಲ್ಲಿ ಇರುವಾಗಲೇ ಮತ್ತೊಬ್ಬಳು ಹುಡುಗಿಯನ್ನು ತನ್ನ ಅಪಾರ್ಟ್‌ಮೆಂಟ್‌ಗೆ ಕರೆತಂದಿದ್ದಾನೆ. ಅದೂ ಕೂಡ ಶ್ರದ್ಧಾಳನ್ನು ಪರಿಚಯ ಮಾಡಿಕೊಂಡ ಡೇಟಿಂಗ್‌ ಆಫ್‌ ಮೂಲಕವೇ ಈ ಹುಡುಗಿಯನ್ನು ಪರಿಚಯ ಮಾಡಿಕೊಂಡಿದ್ದ ಎಂಬ ಸತ್ಯ ವಿಚಾರಣೆ ವೇಳೆ ಬಯಲಾಗಿದೆ.
ಶ್ರದ್ಧಾಳನ್ನು ಕೊಂದ 15-20 ದಿನಗಳ ನಂತರ, ಅಫ್ತಾಬ್ ಪೂನಾವಾಲಾ ಅದೇ ಆ್ಯಪ್‌ನಲ್ಲಿ ಮತ್ತೊಬ್ಬ ಹುಡುಗಿಯನ್ನು ಭೇಟಿಯಾಗಿ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದಾನೆ ಎಂದು ಪೊಲೀಸ್ ಮೂಲಗಳು ಇಂದು ತಿಳಿಸಿವೆ.

ಡೆಡ್ಲಿ ಕಿಲ್ಲರ್ ಅಫ್ತಾಬ್​ನ ಮತ್ತೊಂದು ಕರಾಳ ಮುಖವಾಗಿದ್ದು. ಅಫ್ತಾಬ್​ ಲ್ಯಾಪ್​ಟಾಪ್​ನಲ್ಲಿತ್ತು ಬೆಚ್ಚಿ ಬೀಳಿಸೋ ಮಾಹಿತಿ ಸಿಕ್ಕಿದೆ. ಹೆಸರಿಗೆ ಒಬ್ಬಳು ಒಳಗೊಳಗೆ ನಾಲ್ವರ ಜೊತೆ ನಂಟು ಇಟ್ಟುಕೊಂಡಿದ್ದಾನೆ.ಶ್ರದ್ಧಾ ಮಾತ್ರವಲ್ಲ ಹಲವರ ಜೊತೆ ಅಫ್ತಾಬ್​ ಡೇಟಿಂಗ್ ಮಾಡುತ್ತಿದ್ದ. ಪೊಲೀಸರು ಅಫ್ತಾಬ್​ ಲ್ಯಾಪ್​ಟಾಪ್​, ಮೊಬೈಲ್​ನ ವಶಕ್ಕೆ ಪಡೆದಿದ್ಧಾರೆಶ್ರದ್ಧಾ ಜೊತೆ ಜೊತೆಯಲ್ಲೇ ಹಲವರ ಜೊತೆ ಡೇಟ್​ ಮಾಡತ್ತಿದ್ದ ಎಂಬ ಸತ್ಯ ಹೊರಬಂದಿದೆ. ಡೇಟಿಂಗ್​ ಆ್ಯಪ್​ನಲ್ಲೇ ಹುಡುಗೀರನ್ನ ಬುಟ್ಟಿಗೆ ಹಾಕಿಕೊಳುತ್ತಿದ್ದ. ಶ್ರದ್ಧಾ ಅಪಾರ್ಟ್​ಮೆಂಟ್​ನಲ್ಲಿ ಇದ್ದರೆ ಹೊರಗಡೆ ಮತ್ತೆ ಹಲವರು ಇರುತ್ತಿದ್ದರು
ಇಂತಹ ಪಾಪಿಯನ್ನು ಬಿಡ ಬಾರದು ಇವನಿಗೆ ಆದಷ್ಟು ಬೇಗ ಗಲ್ಲು ಶಿಕ್ಷೆ ಕೊಡಿಸುವಂತೆ ಶ್ರದ್ಧಾ
ತಂದೆ ಬೇಡಿ ಕೊಂಡಿದ್ದಾರೆ / ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ . ಮತ್ತು ಶೇರ್ ಮಾಡಿ .

By Kumar K