ಅಫ್ತಾಬ್ ಅಮೀನ್ ಪೂನಾವಾಲಾ, ತನ್ನ ಪ್ರೇಯಸಿಯನ್ನು ಕೊಂದು, ಆಕೆಯ ದೇಹವನ್ನು ಕತ್ತರಿಸಿ, ಭಾಗಗಳನ್ನು ದೆಹಲಿಯಾದ್ಯಂತ ಎಸೆದಿದ್ದಾನೆ. ಕೊಲೆಯಾದ ಬಳಿಕ ಅವಳ ದೇಹ ಮನೆಯಲ್ಲಿ ಇರುವಾಗಲೇ ಮತ್ತೊಬ್ಬಳು ಹುಡುಗಿಯನ್ನು ತನ್ನ ಅಪಾರ್ಟ್‌ಮೆಂಟ್‌ಗೆ ಕರೆತಂದಿದ್ದಾನೆ. ಅದೂ ಕೂಡ ಶ್ರದ್ಧಾಳನ್ನು ಪರಿಚಯ ಮಾಡಿಕೋಮಡ ಡೇಟಿಂಗ್‌ ಆಫ್‌ ಮೂಲಕವೇ ಈ ಹುಡುಗಿಯನ್ನು ಪರಿಚಯ ಮಾಡಿಕೊಂಡಿದ್ದ ಎಂಬ ಸತ್ಯ ವಿಚಾರಣೆ ವೇಳೆ ಬಯಲಾಗಿದೆ.

ಅಪಾರ್ಟ್‌ಮೆಂಟ್‌ನಲ್ಲಿ ಶ್ರದ್ಧಾ ಅವರ ದೇಹದ ಭಾಗಗಳಿದ್ದಾಗ ಬೇರೆ ಹುಡುಗಿಯನ್ನು ಮನೆಗೆ ಕರೆ ತಂದಿದ್ದನಾ. ಈ ಕೊಲೆಗೆ ಕಾರಣವೇಣು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಆತನ ಪ್ರೊಫೈಲ್‌ನ ವಿವರಗಳಿಗಾಗಿ ಡೇಟಿಂಗ್ ಅಪ್ಲಿಕೇಶನ್ ಅನ್ನು ಕೇಳಬಹುದು ಎಂದು ಮೂಲಗಳು ಹೇಳುತ್ತವೆ. 28 ವರ್ಷದ ಅಫ್ತಾಬ್ ಪೂನಾವಾಲಾ, 26 ವರ್ಷದ ಶ್ರದ್ಧಾ ವಾಕರ್ ಅವರನ್ನು ಬಂಬಲ್‌ ಎಂಬ ಡೇಟಿಂಗ್‌ ಆಪ್ ನಲ್ಲಿ ಭೇಟಿಯಾಗಿದ್ದರು. ಮುಂಬೈನಲ್ಲಿ ಪ್ರಾರಂಭವಾದ ಪ್ರಣಯ ಮೇ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಭೀಕರ ಕೊಲೆಯಲ್ಲಿ ಕೊನೆಗೊಳ್ಳುವ ಮೊದಲು ಅವರು ಮೂರು ವರ್ಷಗಳ ಕಾಲ ಒಟ್ಟಿಗೆ ಇದ್ದರು.

ಶ್ರದ್ಧಾಳನ್ನು ಕೊಂದ 15-20 ದಿನಗಳ ನಂತರ, ಅಫ್ತಾಬ್ ಪೂನಾವಾಲಾ ಅದೇ ಆ್ಯಪ್‌ನಲ್ಲಿ ಮತ್ತೊಬ್ಬ ಹುಡುಗಿಯನ್ನು ಭೇಟಿಯಾಗಿ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದಾನೆ ಎಂದು ಪೊಲೀಸ್ ಮೂಲಗಳು ಇಂದು ತಿಳಿಸಿವೆ. ಅವರು ಮಹಿಳೆಯನ್ನು ಆಗಾಗ್ಗೆ ಮನೆಗೆ ಕರೆತಂದಿದ್ದ. ಆದರೆ ಅವನು ತನ್ನ ಹೊಸ ಗೆಳತಿಯನ್ನು ಮನೆಗೆ ಕರೆತಂದಾಗ, ಅವನು ಬಿಡಿಭಾಗಗಳನ್ನು ಕಬೋರ್ಡ್‌ಗೆ ಸ್ಥಳಾಂತರಿಸಿದನು ಎಂದು ಮೂಲಗಳು ತಿಳಿಸಿವೆ. ಇನ್ನು ಶ್ರದ್ಧಾಳನ್ನು ಕೊಂದ ಮೇಲೂ ಅಫ್ತಬ್‌ ಆಕೆಯ ಸೋಶಿಯಲ್‌ ಮೀಡಿಯಾ ಖಾತೆಗಳನ್ನು ಬಳಸಿ, ಶ್ರದ್ಧಾಳ ಸ್ನೇಹಿತರ ಜೊತೆಗೆ ಚಾಟ್‌ ಂಆಡಿದ್ದಾನೆ. ಅವಳು ಅರಾಮಾಗಿದ್ದಾಳೆ ಎಂಬಂತೆ ಬಿಂಬಿಸಿದ್ದಾನೆ.